Wednesday, January 20, 2010

ಏನಪ್ಪಾ ಅಂದ್ರೆ....

ನಮ್ಮ ಮನೇಲಿ..

ನಾಳಿದ್ದು ನೆಟ್ವರ್ಕ್ ಪರೀಕ್ಷೆ ಇದೆ..ಏನು ಓದಿಲ್ಲಾ..ಟಿವಿ ನೋಡಕು ಮೂಡ್ ಇಲ್ಲ..ಹೊರಗಡೆ ಹೋಗಾಕು ಮೂಡ್ ಇಲ್ಲ..ಊಟ ಮಾಡಕು ಮೂಡ್ ಇಲ್ಲ...ಥತ್... ಕೂತ್ಕಂಡು ಓದನ ಅಂದ್ರೆ ಆದಕ್ಕೂ ಮೂಡ್ ಇಲ್ಲಾ. ..ಪರೀಕ್ಷೆ ಲಿ ಏನು ಬರಿಯದು...ಅಂತ..ಏನಪ್ಪಾ ಮಾಡದು ಈಗ....

ಅಮ್ಮ : ಶಶಿ...ಸಂತೋಷ್ ಬಂದ ನೋಡು..


ಶಶಿ : ಸರಿ ... ನೋಡ್ತಿನಿ ..

ಶಶಿ : ಬಾ ಮಗ..ಫುಲ್ ಮುಗಿತ ಓದಿ ...

ಸಂತೋಷ್ : ಇಲ್ಲ ಲೇ ಇನ್ನು ಸ್ಟಾರ್ಟ್ಮಾಡಿಲ್ಲ ...

ಶಶಿ: ಯಾಕೋ..

ಸಂತೋಷ್ : ಏನು ಮಾಡದು ಮಗ..ಓದಾಕೆ ಮೂಡ್ ಇಲ್ಲ.ಲೇ..ಸೆಲ್ ನಲ್ಲಿ ಅರ್ಚನ ಜೊತ ಚಾಟ್ ಮಾಡ್ಕೊಂಡು ಕೂತಿದೆ.. ಈಗ ಓದ ಬೇಕು ಮಗ..

ಶಶಿ: ಯಾರದಾದರು ನೋಟ್ಸ್ ಸಿಗುತ್ಹ...

ಸಂತೋಷ್ : ನೋಡ್ಬೇಕು...ಮಧು ಹತ್ರ ಹೋಗಣ ಬಾ... ನೋಟ್ ಮಾಡ್ತಾ ಇರ್ತಾನೆ ..ಹಂಗೆ ಏನಾದ್ರು ಮಾಡಿದ್ರೆ ತಗೊಂಡು ಜೆರೊಕ್ಷ್ ಮಾಡ್ಸನ.ನಡಿ..ನಿನ್ ಹೀರೋ ಪುಚ್ ಸ್ಟಾರ್ಟ್ ಮಾಡು..

ಶಶಿ: ಸರಿ ಮಗ..ನೋಡವ ನಡಿ..

ಮಧು ಮನೇಲಿ...

ಮಧು : ಓಹ್ ...ಏನಪ್ಪಾ ..ಇಬ್ರು ಓದಿ ಮುಗ್ಸಿ ಊರ್ ತಿರುಗುತ ಇದಿರಾ...

ಸಂತೋಷ್ : ಹೂ ..ಮಗ.ನಿನ್ನು ಕರ್ಕೊಂಡು ಹೋಗವ ಅಂತ ಬಂದ್ವಿ..ನಡಿ ..

ಮಧು: ಯಾಕೆ..ಬಂದ್ ಬಗ್ ಬಿಡು.....

ಸಂತೋಷ್ : ಸರಿ..ಮಗ..ಎಷ್ಟು ನೋಟ್ಸ್ ರೆಡಿ ಮಾಡ್ದೆ..

ಮಧು : 3 ಪಾಠ ಆಯಿತು ಮಗ...

ಸಂತೋಷ್ : ಸರಿ ಜೆರೊಕ್ಷ್ ಮಾಡಿಸಿ ತಂದು ಕೊಡ್ತಿವೆ .ರೆಡಿ ಆಗಿರೋ ನೋಟ್ಸ್ ಕೊಡು ..ಮಿಕಿದು ರೆಡಿ ಮಾಡು..ಆಮೇಲೆ ಬಂದು ತಗೊಂಡು ಹೋಗ್ತಿವೆ..


ಮಧು : ತಗೋ ಒಂದೇ ಪೇಜ್..ಬರಿ ಬೇಕಾದ ಪಾಯಿಂಟ್ಸ್ ಇದೆ..

ಶಶಿ : ತೂ..ಲೇ..ಬರಿ ಒಂದು ಪೇಜ್ ನೋಟ್ಸ್ ಗೆ ಇಲ್ಲಿ ತನಕ ಬಂದವ ...ಅದು ಬರಿ ಒಂದೇ ಸೈಡ್ ಬರ್ದಿದಿಯಲ್ಲೋ ..

ಸಂತೋಷ್ : ಬರಿ ಪಾಯಿಂಟ್ಸ್ ಬರ್ದಿದಾನೆ..ಸದ್ಯಕೆ ಇದದ್ರೂ ಇರ್ಲಿ.ನಡಿ ಮಗ..ಜೆರೊಕ್ಷ್ ಮಾಡ್ಸನ.. ಇದನ್ನೇ..

ಜೆರೊಕ್ಷ್ ಅಂಗಡಿಲಿ..

ಶಶಿ: ಜೆರೊಕ್ಷ್ ಮಾಡಿ ಕೊಡಿ ...

ಜೆರೊಕ್ಷ್ ಅಂಗಡಿ ಹುಡುಗಿ : ಎಷ್ಟು ಕಾಪಿ ..

ಶಶಿ: ೨ ಕಾಪಿ

ಜೆರೊಕ್ಷ್ ಅಂಗಡಿ ಹುಡುಗಿ : ಪೇಜ್ ಹಿಂದೆ ನು ಮಾಡಬೇಕ..?

ಇಲ್ಲೇ ನೋಡಿ..ನನಗೆ.. ಸಂತೋಷ್ ಗೆ ಗಾಬರಿ ಅಗಿದು...ಒಬ್ರುಗೊಬ್ರು ಮುಕ ಮುಕ ನೋಡ್ ಕಂಡವು...ಯಾಕೆ ಅಂದ್ರೆ.. ಆ ೧ ಪೇಜ್ ಹಿಂದೆ ಏನು ಇಲ್ಲ..ಖಾಲಿ ಪೇಪರ್ ಅದು..ಅದನ್ನು ಜೆರೊಕ್ಷ್ ಮಾಡಲ ಅಂತ ಕೇಳ್ತಾ ಇದ್ದಾಳೆ... ಏನಾದ್ರು ಜೋಕ್ ಮಾಡ್ತಾ ಇದ್ದಾಳೆ...ಇಲ್ಲ ಸುಮ್ನೆ ಕೇಳ್ತಾ ಇದ್ದಾಳೆ...ಏನು ಗೊಥಯ್ಥ ಇಲ್ವಾ ....



ಶಶಿ : ಬೇಡ...ಒಂದೇ ಸೈಡ್ ಜೆರೊಕ್ಷ್ ಮಾಡಿ ..ಸಾಕು..

ಜೆರೊಕ್ಷ್ ಅಂಗಡಿ ಹುಡುಗಿ : ಸರಿ...


ಸಂತೋಷ್..ನಾನು .. ...ಜೆರೊಕ್ಷ್ ಗೆ ೧ ರೂಪಾಯಿ ಆಯಿತು .. ..ಕಾಸು ಕೊಟ್ಟು ...ಮನೆಗೆ ವಾಪಾಸ್ ಬಂದವು ...


ಏನಪ್ಪ ಅಂದ್ರೆ...ಜನ ದಡ್ಡರ ತರ ಆಡ್ತಾರೆ ಅಂತ ಕೇಳಿದ್ದೆ...ಆದ್ರೆ..ನೋಡಿದ್ದು ಇದೆ ಫಸ್ಟ್...



No comments:

Post a Comment