Thursday, January 14, 2010

ಅವರು ಸತ್ಹಿದು ಅವರಿಗೆ ಒಳ್ಳೆಯದಾಯಿತು

ಆಫೀಸ್ ಗೆ ಬಂದು ಸಿಸ್ಟಮ್ ಓಪನ್ ಮಾಡಿ ಮೇಲ್ ಚೆಕ್ ಮಾಡಿ ಆಯಿತು. ಕೈ ತುಂಬಾ ಕೆಲಸ ಏನು ಇರ್ಲಿಲ್ಲಾ. ಸರಿ ಕ್ಯಾಂಟೀನ್ ಗೆ ಹೋಗಿ ಒಂದು ಕಪ್ ಕಾಫಿ ತಗೊಂಡು, ಕೊನೆ ಟೇಬಲ್ ಗೆ ಹೋಗಿ ಕುತ್ಕೊಂಡು ಕಾಫಿ ನ ಆಸ್ವಾದಿಸಲು ಶುರು ಮಾಡಿದೆ. ಕಾಫಿ ಕುಡಿದ ಮೇಲೆ ಏನು ಮಾಡದು..ಸರಿ...ಫೋನ್ ಕೈ ಗೆ ತಗೊಂಡು ನಂ ಡೆಲ್ಲಿ ದೋಸ್ತ್ ಗಣೇಶ್ ಗೆ ಕಾಲ್ ಮಾಡ್ದೆ.. ಶಶಿ : ಏನ್ ಮಗ...ಸಮಾಚಾರ..ಏನು ಮಾಡ್ತಾ ಇದ್ದೀಯ.. ಗಣೇಶ : ಏನು ಇಲ್ಲ ಆಫೀಸ್ ಗೆ ಬಂದೆ...ಏನು ಕೆಲಸ ಇಲ್ಲ ..ಸುಮ್ನೆ ಹಂಗೆ ಕುಳ್ತ್ಹಿದೆ...ಮತ್ತೆ ನಿಂದು ಏನು ಸಮಾಚಾರ.. ಶಶಿ : ನನದು ಏನು ಇಲ್ಲ ಮಗ...ಮಾಮೂಲಿ..ಯಾಕೋ ಇಲ್ಲಿ ಎಲ್ಲ ಸರಿ ಇದೆ..ಆದ್ರೆ ಕೆಲಸ ನೆ ಇಲ್ಲ ...ಮತ್ತೆ ನಾಳೆ ..ವೀಕೆಂಡ್ ಪ್ಲಾನ್ ಏನು..? ಗಣೇಶ : ನಾಳೆ ಊರಿಗೆ ಹೊರಟೆ...ಟ್ರೈನ್ ಟಿಕೆಟ್ ಬುಕ್ ಬುಕ್ ಆಯಿತು..ಡೆಲ್ಲಿ ಸ್ಟೇಷನ್ ಇಂದ ಪಾಟ್ನಾ ಗೆ ಸೀದಾ ಟಿಕೆಟ್ ಸಿಕಿಲ್ಲಾ ...ಕ್ಯಾಲ್ಚುತ್ತ ಗೆ ಹೋಗಿ ಅಲ್ಲಿಂದ ಹೌರ ಸ್ಟೇಷನ್ ಇಂದ ಮತ್ತೆ ಪಾಟ್ನಾ ಟ್ರೈನ್ ಕ್ಯಾಚ್ ಮಾಡಬೇಕು... ಶಶಿ: ಯಾಕೋ ...ಇಂದಿದಂಗೆ ಊರಿಗೆ ಹೊರಟೆ...ನ್ಯೂ ಇಯರ್ ಅಂತ ನ.. ? ಗಣೇಶ: ಇಲ್ಲ..ನಮ್ಮ ಸಂಬಂದಿಕರು ಒಬ್ರು ಮೊನ್ನೆ ಸತ್ತು ಹೋದರು...ಅವರ ತಿಥಿ ಇದೆ..ನಾನು ಹೋಗ್ಬೇಕು... ಶಶಿ: ಯಾರೋ ಅದು...ಮೊನ್ನೆ ಕಾಲ್ ಮಾಡಿದಾಗ ಏನು ಹೇಳಲೇ ಇಲ್ಲ...ಈಗ ಹೇಳ್ತಾ ಇದ್ದೀಯ ಗಣೇಶ: ಅದು ಹೇಳುವಂತ ವಿಷಯ ಏನು ಇಲ್ಲ ಬಿಡು...ಯಾಕೆ ಅಂದ್ರೆ...ಅವರು ಅಂತ ಹೇಳ್ಕೊವಥ ವ್ಯಕ್ತಿ ಏನು ಅಲ್ಲ. ಶಶಿ: ಯಾರೋ ಅದು ? ಗಣೇಶ್ : ಅವರು ..ನಮ್ ತಂದೆ ಇದ್ದರಲ್ಲ ಅವರ ತಮ್ಮ..ನಮ್ ತಂದೆ ಗೆ ೧ ತಮ್ಮ ..೧ ಅಣ್ಣ ಇದ್ದಾರೆ...ಈಗ ಸತ್ಹವರು ಏನು ಕೆಲಸ ಮಾಡ್ತಾ ಇರಿಲ್ಲ..ಅವರು ಒಂಥರಾ ಮೆಂಟಲ್ ಪಾರ್ಟಿ..ಅವರು ಮದ್ವೆ ನೆ ಆಗಿರಲಿಲ್ಲ .. ಶಶಿ: ಮತ್ತೆ ಯಾರು ನೋಡಿಕೊಳುತ ಇದ್ರೂ..ಪಾಪ ಅಲ್ವಾ ? ಗಣೇಶ್: ಪಾಪ ಗೀಪ ಏನು ಇಲ್ಲ. ನಮ್ ಅಂಕಲ್ ಒಬ್ರು ಪೋಲಿಸ್ ಆಗಿದಾರೆ..ಅವರ ಮನೆಯಲ್ಲಿ ಕೆಲಸದವರು ಈದ್ರು ..ಅವರು ಇವರ ಕೇರ್ ತಗೊಥ ಇದ್ರೂ..ಇನ್ನು ೨ ವರ್ಷ ದಲ್ಲಿ ಅವರು ನಿವೃತಿ ಹೊಂದುತ ಆಗ್ತಾ ಇದ್ದಾರೆ ..ಈಗ ಅವರು ಸತ್ಹಿದು ಅವರಿಗೆ ಒಳ್ಳೆಯದಾತು. ಇಲ್ಲ ಅಂದ್ರೆ ಅವರಿಗೆ ಮುಂದಕ್ಕೆ ತೊಂದರೆ ಆಗ್ತಾತು ಅಲ್ವಾ.. ಶಶಿ: ಲೇ ಏನು ಹಿಂಗೆ ಮಾತು ಅಡ್ಥ ಇದಿದ್ಯಾ ...ತು ನಿನ್ಮನೆ ಕಾಯೇ ಹೋಗ.. ಗಣೇಶ : ಹಂಗಲ್ಲ ಶಶಿ..ನಾನು ಹಿಂಗೆ ಹೇಳ್ದೆ ಅಂತ ನಂಗೆ ಅವರ ಮೇಲೆ ಪ್ರೀತಿ ಇಲ್ಲ ಅಂತ ಅಲ್ಲ್ಲ.ವಾಟ್ ಇಸ್ ಹಸ ಡನ್ ..ಇಟ್ಸ್ ಗುಡ್ ಫಾರ್ ಹಿಂ ಓನ್ಲಿ ಅಸ್ತೆ...ಸರಿ ಮತ್ತೆ ಏನು ವಿಷ್ಯ.ಸಂಬಳ ಜಾಸ್ತಿ ಅಗೋ ಬಾಗೆ ಏನಾದ್ರು ಗೊತ್ಹಾಥ ..? ಶಶಿ: ಇಲ್ಲ ಮಗ...ಏನು ನ್ಯೂಸ್ ಇಲ್ಲ..ಇನ್ನು..ಸರಿ...ಹೋಗಿ ಕೆಲಸ ಮಾಡು..ಮತ್ತೆ ಈವ್ನಿಂಗ್ ಫ್ರೀ ಆದ್ರೆ ಕಾಲ್ ಮದ್ಥಿನೀ..ಇಲ್ಲ ಅಂದ್ರೆ...ನಾಳೆ ಗೆ ಹ್ಯಾಪಿ ಜೌರ್ನಿ..ಬೈ ಗಣೇಶ್ : ಸರಿ..ಬೈ.. " ಅವರು ಸತ್ಹಿದು ಅವರಿಗೆ ಒಳ್ಳೆಯದಾಯಿತು "...ಜನರು ಸತ್ರೆ , ಬೇರೆಯವರಿಗಲ್ಲ ...ಅದು ಅವರಿಗೆ ಒಳ್ಳೆಯದಾಗುತದೆ ಅಂತ ಹೊಸ ವಿಷ್ಯ ಗೊತಾಯ್ತು ಅನ್ನಿ..

1 comment:

  1. ಉತ್ಕೃಷ್ಟವಾಗಿದೆ ಕಣೋ, ಹಿಂಗೇ ಬರೀತಾ ಇರು.

    ReplyDelete