Sunday, March 14, 2010

ಹಿಂಗೆ ಒಂದು ಇಮೇಲ್ !!

ಎಲ್ಲೋ ಒಂದು ಕಡೆ ಓದಿದ್ದೆ ...ಜಪಾನ್ ನಲ್ಲಿ ಒಂದೊಂದು ಕಡೆ ಪುನಶ್ಚೇತನ ಸೆಂಟರ್ ಗಳು ಇರುತಂತೆ. ಜನಕ್ಕೆ ತಮ್ಮ ವಿರೋದಿ ಬಗ್ಗೆ ತುಂಬಾ ಕೋಪ ಬಂದಾಗ ಅಲ್ಲಿಗೆ ಹೋಗಿ, ಅಲ್ಲಿ ಇರೋ ಗೊಂಬೆಗೆ ಚೆನ್ನಾಗಿ ಹೊಡೆದು ತಮ್ಮ ಕೋಪ ಕಮ್ಮಿ ಮಾಡಿ ಕೊಳ್ತಾರಂತೆ . ನಂತರ ಎದುರಿಗೆ ತಮ್ಮ ವಿರೋದಿ ಬಂದರು ನಗು ಮುಖದಿಂದ ಮಾತು ಆಡ್ತಾರಂತೆ. ಕೋಪ ಕಮ್ಮಿ ಮಾಡಿಕೊಳ್ಳೋ ವಿದಾನ ಚೆನ್ನಾಗಿ ಇದೆ ಅಲ್ವಾ. ಸರಿ ಮುಂದೆ ಓದಿ ಈಗ...

ನಾನು ಡೆಲ್ಲಿ ಯಲ್ಲಿ ಕೆಲಸ ಮಾಡ್ತ ಇದ್ದ ದಿನಗಳು..ಒಂದು ಪ್ರಾಜೆಕ್ಟ್ ವರ್ಕ್ ಮೇಲೆ ಬೇರೆ ಕಂಪನಿಗೆ ಆರು ತಿಂಗಳ ಮೇಲೆ ಹೋಗಿದ್ದೆ. ನಾನು ಹೋಗುವ ಮೊದಲೇ ನನ್ನ ಇಬ್ರು ಸಹದ್ಯೋಗಿಗಳು ಅಲ್ಲಿ ಇದ್ದರು..ನಾನು ಮೂರನೇ ಯವನಾಗಿ ಹೋಗಿದ್ದೆ. ನಾನು ಅಲ್ಲಿಗೆ ಹೋಗಿ ..ನಂ ರಿಪೋರ್ಟಿಂಗ್ ಮ್ಯಾನೇಜರ್ 'ರಾಹುಲ್' ಗೆ ರಿಪೋರ್ಟ್ ಮಾಡಿಕೊಂಡೆ. ರಾಹುಲ್ ಮೊದಲ ದಿನವೇ ಪ್ರಾಜೆಕ್ಟ್ ಬಗ್ಗೆ ಒಂದು ಓವರ್ ವ್ಯೂ ಕೊಟ್ಟರು. ನಂತರ ನನ್ನ ಇಬ್ರು ಸಹದ್ಯೋಗಿಗಳು ಅನ್ನು ಮದ್ಯಾನ ಊಟ ಟೈಮ್ ನಲ್ಲಿ ಮೀಟ್ ಮಾಡ್ದೆ. ಒಬ್ಬ 'ಸಂದೀಪ್' .. ನೀತಾ ಅನ್ನೋ ಮ್ಯಾನೇಜರಗು ..ಇನ್ನೊಬ್ಬ 'ಗಣೇಶ' ..ಅಮಿತ್ ಶರ್ಮ ಅನ್ನೋ ಪ್ರಾಜೆಕ್ಟ್ ಮ್ಯಾನೇಜರಗೆ ರಿಪೋರ್ಟ್ ಮಾಡ್ಕೊಂಡಿದ್ರು. ಮಾತು ಕತೆ ಎಲ್ಲ ಅದ ಮೇಲೆ ತಿಳಿತು....ನೀತಾ ...ರಾಹುಲ್ ಇಬ್ರು ಪರವಾಗಿಲ್ಲ ..ಆದ್ರೆ...ಅಮಿತ್ ಶರ್ಮ ಸ್ವಲ್ಪ ತರ್ಲೆ ಮ್ಯಾನೇಜರ್ ...ಸ್ವಲ್ಪ ಕಿರಿಕ್ ಜಾಸ್ತಿ ಅಂತ...

ಪಾಪ ನಂ ದೋಸ್ತ್ ಗಣೇಶ್ ನೆ ಯಾಕೋ ಎಲ್ಲ ಕಡೆ ಹಿಂಗೆ ಅಗಥಲ್ಲ ಅಂತ .... ಅವನು ಕಯ್ ಹಿಡಿದ ಪ್ರಾಜೆಕ್ಟ್ ಗಳು ..ಅವನ ಕೆಲಸದಲ್ಲಿ ಒಂದಲ್ಲ ಒಂದು ತೊಂದ್ರೆ ಇರುತ್ಹೆ... ಯಾಕೋ ..ಮತ್ತೆ ಪಾಪ ಅನುಸ್ತು ನಂಗೆ..

ಹಿಂಗೆ ಕೆಲಸ ಶುರು ಆಗಿ ಎರಡು ತಿಂಗಳು ಆಯಿತು. ನಾನು ಮೂರನೇ ಮಹಡಿಲ್ಲಿ ,ಗಣೇಶ್ ಎರಡನೆ ಮಹಡಿಯಲ್ಲಿ, ಸಂದೀಪ್ ಒಂದನೇ ಮಹಡಿಯಲ್ಲಿ ಕೆಲಸ ಮಾಡ್ತಾ ಇದ್ದವು. ನನ್ನ ಇವಿನಿಂಗ್ ಕಾಫಿ ಯಾವಾಗಲು ಗಣೇಶ್ ಜೊತೆ ಆಗದು..ನಾನು ಅವನ ಹತ್ರ ಹೋಗ್ತಾ ಇದ್ದೆ ..ಇಲ್ಲಾ ಅವನೇ ನನ್ನ ಹತ್ರ ಬರ್ತಾ ಇದ್ದ...ಕಾಫಿ ಜೊತೆ ..ಹರಟೆ ಹೊಡ್ದು, ವಾಪಾಸ್ ಕೆಲಸ ಮಡಕೆ ಹೋಗ್ತಾ ಇದ್ದವು..ಇದು ನಮ್ ಡೈಲಿ ರೂಟಿನ್ ಆಗಿತು...

ಹೀಗೆ ಒಂದು ದಿನ ..ಹಿಂಗೆ ಸಮಯ ನಾಲ್ಕು ಗಂಟೆ ಅಗಿತ್ಹು. ಕಾಫಿ ಟೈಮ್ ..ಗಣೇಶ್ ಗೆ 'ಬಾ' ಅಂತ ಚಾಟ್ ಮೆಸೇಜ್ ಕಳ್ಸಿದೆ
. ಅವನು ವಾಪಾಸ್ ' ಬ್ಯುಸಿ' ಅಂತ ಕಳ್ಸಿದ. ಸರಿ ಅಂತ ನಾನೇ ಅವನ ಹತ್ರ ಹೋದೆ...ಅವನು ಒಂದು ಮೇಲ್ ಟೈಪ್ ಮಾಡಿ ಇಟ್ಟಿದ್ದ ..ಯಾಕೋ ಸ್ವಲ್ಪ ಬೇಜಾರ್ ಮೂಡ ನಲ್ಲಿ ಇದ್ದ ಹಂಗೆ ಈತ್ಹು. ಯಾಕೋ ಅಂತ ಕೇಳ್ದೆ ...ಏನು ಹೇಳಲಿಲ್ಲ ....ಏನಾಯ್ತು ಇವಂಗೆ ಅಂತ ಇವನು ಟೈಪ್ ಮಾಡಿದ್ದ ಮೇಲ್ ನೋಡ್ದೆ..ಅದು 'ಅಮಿತ್ ಶರ್ಮ' ಅಂದ್ರೆ ಅವನ ರಿಪೋರ್ಟಿಂಗ್ ಮ್ಯಾನೇಜರ್ ಗೆ ಬರ್ದಿದ್ದು . ಕುತ್ಕೊಂಡು ಓದ್ದೆ.

ನಂತರ ತಿಳಿತು........ಏನು ಅಂದ್ರೆ...'ಅಮಿತ್ ಶರ್ಮ' ಸುಮ್ನೆ ಸುಮ್ನೆ ಗಣೇಶನ ಮೇಲೆ 'ನೀನು ಕೆಲಸ ಸರಿಯಾಗಿ ಮಾಡ್ತಾ ಇಲ್ಲ' ಅಂತ ಕಂಪ್ಲೈಂಟ್ ಮಾಡಿದನಂತೆ..
ಸುಮ್ನೆ ಸುಮ್ನೆ ಹೊಸ ತರ್ಲೆ ಬೇರೆ ಮಾಡ್ತಾ ಇರ್ತಾನೆ .ಇದರಿಂದ ಗಣೇಶ್ ಗೆ ಸಕ್ಕತ ಬೇಜಾರಾಗಿದೆ. ಗಣೇಶ್ ಗೆ , ಅ ರಿಪೋರ್ಟಿಂಗ್ ಮ್ಯಾನೇಜರ್ ಗೆ ಎಲ್ಲ ವಿವರಿಸಿ ಹೇಳಕೆ ಭಯ. ಅವನ ಬಗ್ಗೆ ಕೆಟ್ಟ ಕೋಪ ಬೇರೆ..ಏನು ಮಾಡದು ಅಂತ ತಲೆ ಕೆಟ್ಟು, ಕೊನೆಗೆ ಒಂದು ಇಮೇಲ್ ಬರ್ದಿದ್ದಾನೆ.

ಇಮೇಲ್ ನಲ್ಲಿ ಗಣೇಶ್ ಎಲ್ಲ ವಿವರಿಸಿ ಹೇಳಿದ್ದ...ಪ್ರಾಜೆಕ್ಟ್ ನಲ್ಲಿ ಅದ ತಪ್ಪಿನಲ್ಲಿ ತನ್ನ ಪಾತ್ರ ಸ್ವಲ್ಪನು ಇಲ್ಲ ಅಂತ,. ಮತ್ತೆ ಅವನು ಕೊಡೊ ತೊಂದರೆ ಬಗ್ಗೆ ಎಲ್ಲ ವಿವರಿಸಿದ್ದ, ಇದು ಹೀಗೆ ಮುಂದುವರಿದರೆ ..ನಾನು ಕಂಪನಿ ಬಿಟ್ಟು ಹೋಗುವುದಾಗಿ ಹೇಳಿದ್ದ..ಅಂತು ಇಮೇಲ್ ಚೆನ್ನಾಗಿ ಬರೆದಿದ್ದ...ಅದನ್ನು ' ಅಮಿತ್ ಶರ್ಮ' ಗೆ ಕಲ್ಸದೊಂದು ಬಾಕಿ ಅಸ್ತೆ....

ನಾನು ಅವನ ಇಮೇಲ್ ಓದಿ, ಇಮೇಲ್ ಚೆನ್ನಾಗಿ ಇದೆ ಎಂದು ಹೇಳಿ 'ಅದನ್ನು ಬೇಗ ಕಳಿಸು' ಈದನ್ನು ಓದಿದ ಮೇಲಾದ್ರು ಅವಂಗೆ ಬುದ್ದಿ ಬಂದ್ರೆ ಸರಿ ಹೋಗುತ್ಹೆ ...ನೀನ್ ಟೆನ್ಶನ್ ಎಲ್ಲ ಕಡಮೆ ಅಗುಥೆ ಅಂತೆ ಸಮಾದಾನ ಮಾಡ್ದೆ..

ಣೇಶ್ ಹಂಗೆ ಸುಮ್ನೆ ಕೂತಿದ್ದ...ನಾನು ಮನಸಿನಲ್ಲೇ ...'ಮೇಲ್ ರೆಡಿ ಮಡಿ ಯಾಕೆ ಹಿಂಗೆ ಕುತೋನೆ ..ಅದನ್ನ ಕಳ್ಸಿದ್ ಬಿಟ್ಟು' ಅಂತ ಅನ್ಕೊಂಡು 'ಯಾಕೋ ಮೇಲ್ ಕಲ್ಸೋ ಬೇಗೋ.. ಕಾಫಿ ಕುಡ್ದು ಬರಣ' ಅಂತ ಹೇಳ್ದೆ.

ಅದಕ್ಕೆ ಅವನು ..ಸರಿ ಅಂತ ಹೇಳ್ಬಿಟ್ಟು.. ಮೇಲ್ ಡಿಲೀಟ್ ಮಾಡಿಬಿಟ್ಟು ...ನಡಿ ಕಾಫಿ ಗೆ ಹೋಗಣ ಅಂತ ಹೇಳ್ದಾ..

ನನಗೆ ಫುಲ್ ಶಾಕ್. ಒಂದು ಗಂಟೆ ಇಂದ ಮೇಲ್ ರೆಡಿ ಮಾಡಿ ...ಈಗ ಪೆಕ್ರ ಕಲ್ಸದ್ ಬಿಟ್ಟು ಡಿಲೀಟ್ ಮಾಡಿ ಬಿಟ್ನಲ್ಲ ಅಂಥಾ...

ಗಣೇಶ್ ಕೇಳ್ದೆ ' ಯಾಕೋ ಮೇಲ್ ಡಿಲೀಟ್ ಮಾಡ್ದೆ' ?

ಅದಕ್ಕೆ ಅವನು ' ನೋಡು..ನಾನು ಮೇಲ್ ಅವನಿಗೆ ಕಲ್ಸಬೇಕು ಅಂತ ಬರ್ದಿದಲ್ಲ ...ಅದನ್ನ ನನ್ನ ಸಮಾದಾನಕ್ಕೆ ಬರ್ದಿದ್ದು ..ನಾನು ಅವಂಗೆ ಏನು ಹೇಳ್ಬೇಕು ಅಂತ ಇದ್ದೆ..ಅದನ್ನೆಲ್ಲಾ ಮೇಲ್ ನಲ್ಲಿ ಹೇಳಿ ಆಯಿತು ಅಸ್ಟೆ. ಅವನು ಓದಿದನ ..ಇಲ್ವಾ ಅದು ನಂಗೆ ಬೇಡ..ಆದ್ರೆ..ನಂಗೆ ಏನು ಹೇಳ್ಬೇಕು ಅಂತ ಇದ್ದೆ ಅದನ್ನೆಲ್ಲಾ ಹೊರಗಡೆ ಹಾಕಿದ ಸಮಾದಾನ ಅಸ್ಟೆ..' ನಡಿ ಕಾಫಿ ಗೆ ಹೋಗಣ ಅಂತ ಹೇಳಿ ಮುಂದೆ ನಡೆದ..

ಅರ್ಥ ಆಯಿತಲ್ವಾ ....ನಿಮಗೆ ಯಾರಿಗಾದರು ..ಚೆನ್ನಾಗಿ ಬ್ಯ ಬೇಕು ಅನ್ಸಿ ಹಂಗೆ ಮಾಡಕೆ ಆಗಿಲ್ಲ ಅಂದ್ರೆ...ಅವರನ್ನು ಚೆನ್ನಾಗಿ ಬಯ್ದು ..ಒಂದು ಮೇಲ್ ಬರೀರಿ. ಸ್ವಲ್ಪ ಸಮಾದಾನ ಅದ ಮೇಲೆ..ಅದನ್ನು ಡಿಲೀಟ್ ಮಡಿ ಅಸ್ಟೆ... :)

ಯಾವ ಕಡೆ ?

ಯುಗಾಧಿ ಹಬ್ಬ.. ಬೆಳಗ್ಗೆನೆ ಬೇಗ ಎದ್ದು ...ಸ್ನಾನ ಮಾಡಿ ....ಮನೆ ಬಾಗಿಲಿಗೆ ಹೂವ..ಮಾವಿನ ಸೊಪ್ಪು..ಬೇವಿನ ಸೊಪ್ಪು ಹಾಕಿ..ಅಡಿಗಿಗೆ ಅಮ್ಮನಿಗೆ ಸಹಾಯ ಮಾಡಿ...ಊಟ ಮಾಡಿ..ಕೊನೆಗೆ ಒಂದು ಸಣ್ಣ ನಿದ್ದೆನು ಮಾಡಿ ಆಯಿತು .. ನಿದ್ದೆ ಮುಗಿದ ಮೇಲೆ..ಏನು ಮಾಡ್ಲಿ ... ರಾಘು ಮಾತಾಡ್ಸಿ ಬರನ ಅಂತ ಅವನ ಮನೆಗೆ ಹೊರಟೆ .

ರಾಘು ಮನೆಲೇ ಇದ್ದ..ಅವನ ಅಕ್ಕನ ಎರಡು ಮಕ್ಕಳು ''ರಶ್ಮಿ' ಮತ್ತು 'ಉಜ್ವಲ್' ಇಬ್ರು ಬಂದಿದ್ರು . ಅವರ ಜೊತೆ ಆಟ ಅಡ್ತ ಇದ್ದ. ನಾನು ಹೋದ ಮೇಲೆ ಅ ಎರಡು ಮಕ್ಕಳು ಅವರ ಅಮ್ಮನ ಹತ್ರ ಹೋದವು .. ನಾನು..ರಾಘು ಹಂಗೆ ಹರಟೆ ಹೊಡಿಯಕೆ ಶುರು ಮಾಡ್ಕೊಂಡ್ವು. ಹಿಂಗೆ ಹರಟೆ ಹೊಡಿಬೇಕದ್ರೆ.. 'ಉಜ್ವಲ್' ವಾಪಾಸ್ ಬಂದ.. ಅವನಿಗೆ ಆರು ವರ್ಷ ಅಸ್ಟೆ. ನನಗೆ ನಾಲಿಗೆ ತುರಿಕೆ ಹೆಚ್ಹಾಗಿ..ಅವನ ಜೊತೆ ಕಿಟಲೆ ಮಾತು ಶುರು ಮಾಡ್ದೆ..

ಶಶಿ : ಏನು ಉಜ್ವಲ್ ..ಏನು ಸಮಾಚಾರ...?

ಉಜ್ವಲ್ : ಏನು ಇಲ್ಲ..

ಶಶಿ : ಹೊಸ ಬಟ್ಟೆ ನ ?

ಉಜ್ವಲ್ : ಹೂ...

ಶಶಿ : ನೆನ್ನೆ ನಿಮ್ ಮೇಡಂ ಸಿಕ್ಕಿದ್ರು ...ಅವರು ಹೇಳ್ತಾ ಇದ್ರೂ ...ನೆನ್ನೆ ನೀನು ಸ್ಕೂಲ್ ಗೆ ಹೋಗಿಲ್ಲ ಅಂತ ..ಯಾಕೆ ?

ಉಜ್ವಲ್ : ಓಹ್ ...ನಾನು ನೆನ್ನೆ ಡ್ಯಾಡಿ ಜೊತೆ ಒಂದು ಸಮಾರಂಭಕ್ಕೆ ಹೋಗಿದ್ದೆ.

ಶಶಿ : ಸಮಾರಂಭಕ್ಕೆ ನಾನು ಬಂದಿದ್ದೆ ..ನೀನು ಸಿಕ್ಕೆ ಇಲ್ಲ ಮತ್ತೆ ....?

ಉಜ್ವಲ್.
...ಪೂರ್ವ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಕೇಳಿದ ...

ಉಜ್ವಲ್ : ಅಲ್ಲಿ ಇತ್ತಲ್ಲ ..ಅ ಸಮಾರಂಭಕ್ಕ ಬಂದಿದ್ದು ..?

ಶಶಿ : ಊ ...ಅದಕ್ಕೆ ...ಬಂದಿದ್ದು ..ಯಾಕೆ..

ಉಜ್ವಲ್
ಈಗ ... ಪಶ್ಚಿಮ ದಿಕ್ಕಿನ ಕಡೆ ಕ್ಯೆ ತೋರಿಸಿ ....ನನಗೆ ಹೇಳಿದ ...

" ನಾನು ಕಡೆ ಸಮಾರಂಭಕ್ಕೆ ಹೋಗಿರಲಿಲ್ಲ ..ಈ ಕಡೆ ಸಮಾರಂಭಕ್ಕೆ ಹೋಗಿದ್ದೆ.." ಎಂದ ...

ನಾನು ಅಲ್ಲೇ ಸುಸ್ತು ...ಮುಂದೆ ಏನು ಕೇಳಬೇಕು ಅಂತ ಗೊತ್ಹಾಗ್ಲಿಲ್ಲ ...ರಾಘು ಗೆ ಟಾಟಾ ಹೇಳಿ ವಾಪಾಸ್ ಮನೆಗೆ ಬಂದೆ..