Saturday, February 27, 2010

ನಮ್ಮ ಶಿಲ್ಲಾಂಗ್ ಟ್ರಿಪ್...





ಮೊದಲ
ಸಲ ವಿಮಾನ ಪ್ರಯಾಣ . ಫುಲ್ ಖುಷಿ.. ಫ್ರೆಂಡ್ಸ್ ಗೆ ಎಲ್ಲ ನಾವೇ ಫೋನ್ ಮಾಡಿ.. ಅವರು ಬೇಡ ಅಂದ್ರು ..ನಾವು ಮೊದಲ ಸಲ ವಿಮಾನ ದಲ್ಲಿ ಹೋಗ್ತಾ ಇರೋ ವಿಷ್ಯ ಹೇಳಿ ...ಮನೇಲಿ ಅಮ್ಮ...ಪಕ್ಕದ ಮನೆ ಆಂಟಿ ಜೊತೆ...ಊರಿಂದ ಫೋನ್ಮಾಡಿದ ನಮ್ ಸಂಬಂದಿಕರ ಜೊತೆ...ನಮ್ ಹುಡ್ಗ ವಿಮಾನದಲ್ಲಿ ಟ್ರಿಪ್ ಹೋಗ್ತಾ ಇದ್ದಾನೆ ಅಂತ ಹೇಳಿ...ಅವರ ನಮಗೆ ಫೋನ್ಮಾಡಿ ... ವಿಶ್ ಮಾಡಿ..ನಾವು ಹಂಗೆ ಥ್ಯಾಂಕ್ಸ್ ಅಂತ ಹೇಳಿ .....ಅಂತು.. ಹಿಂಗೆ ಶುರು ಆಯಿತು ನಮ್ ಶಿಲ್ಲಾಂಗ್ ಟ್ರಿಪ್.


ನಾವು ಎಲ್ಲಾದರು ಟ್ರಿಪ್ ಗೆ ಹೊರಡಬೇಕು ಅಂತ ತಿರ್ಮಾನಿಸಿದರೆ, ಕಡಿಮೆ ಅಂದ್ರು ೧೦ - ೧೫ ನೋಡಬೇಕಾದ ಸ್ತಳದ ಪ್ಲಾನ್ಹಾಕಿ ,.. ಹೋಗಬೇಕಾದ ಜಾಗದ ಡಿಸೈಡ್ ಮಾಡಿ, ಆಮೇಲೆ ಅದರ ಮೇಲೆ ಒಂದು ಮೇಲ್ ಶುರು ಮಾಡ್ತೀವಿ. ..ಆಮೇಲೆ ನಮ್ ಮ್ಯಾನೇಜರ್ ಗೆ ಪುಸಿ ಹೊಡ್ದು ಬೇಕಾದ ಡೇಟ್ ಗೆ ರಜ ಹಾಕಿ ... ನಮ್ ಬ್ಯಾಗ್ , ಕ್ಯಾಮೆರಾ ರೆಡಿ ಮಾಡ್ಕೊಂಡು ಹೊರಡದು.. ಹಿಂಗೆ ಟ್ರಿಪ್ ಗೆ ಹೋದರೆ ಮಜಾ ಜಾಸ್ತಿ...ಅಲ್ವಾ...

ಏರ್ ಪೋರ್ಟ್ ಗೆ ಬಂದವು..ರಾಹುಲ್..ಪ್ರಿತ ಇನ್ನು ಬಂದಿರಲಿಲ್ಲ ..ನಂದು , ಸಂತೋಷ್ ದು ಊಟ ಆಗಿರಲಿಲ್ಲ...ಹೊಟ್ಟೆ ಸಕ್ಕತ್ ಹಸಿತ ಇತ್ಹು.

ಸಂತೋಷ್ : ಮಗ, ಬಾ ಅವರು ಬರೋದ್ರೋಲ್ಗೆ ಊಟ ಮಾಡಿ ಬರೋಣ..

ಶಶಿ: ಅವರು ಬರಲಿ ..ಒಟ್ಟಿಗೆ ಹೋಗಣ ...ಚೆನ್ನಾಗಿ ತಿನ್ಬೋದು ...ಶೇರ್ ಮಾಡಿದ್ರೆ ..ಬಿಲ್ ಕಡಮೆ ಅಗತ್ಹೆ ...ಹೆಂಗೆ.. :)

ಸಂತೋಷ್ : ಅದು ನಿಜ ಅನ್ನು..

ಹತ್ತು
ನಿಮಿಷದ ಮೇಲೆ..

ಶಶಿ
: ಅಲ್ಲಿ ನೋಡು ...ಇಬ್ರು ಒಟ್ಟಿಗೆ ಬಂದ್ರು ..

ಸಂತೋಷ್ : ಸೂಪರ್ ಲೇ..
ಅಂತು ಟೈಮ್ ಗೆ ಸರಿಯಾಗ್ ಬಂದ್ರು....

ರಾಹುಲ್ : ಅದು ಹಂಗೆ ಮಗ...ಸಾಹೇಬರು ..ಯಾವಾಗಲು ಟೈಮ್ ಗೆ ಸರಿಯಾಗ್ ಬರ್ತಾರೆ .

ಶಶಿ : ತತ್..ಟ್ರಿಪ್ ಗೆ ಮೊದ್ಲೇ ಶುರು ಮಾಡ್ದ ..ಸರಿ..ನಿಮ್ಮದು ಊಟ ಆಯ್ತಾ..

ಪ್ರಿತ : ನಂದು ಇಲ್ಲ..

ರಾಹುಲ್ : ನಂದು ಆಗಿಲ್ಲ ಮಗ..

ಪ್ರಿತ : ಸರಿ...ನಮ್ ಬ್ಯಾಗ್ ನ ಸೆಕ್ಯೂರಿಟಿ ಚಕ್ ಗೆ ಕೊಟ್ಟು ..ಬೋರ್ಡ್ಡಿಂಗ್ ಪಾಸು ತಂಗೋದು..ಆಮೇಲೆ ಊಟಕ್ಕೆಹೋಗೋಣ..ಆಯ್ತಾ..

ಸಂತೋಷ್ : ಸರಿ ..ಪ್ರಿ ..

ಸರಿ... ವಿಮಾನ ನಿಲ್ದಾಣ ದೊಳಗೆ ಪ್ರವೇಶಿಸಿ...ಆಗಲೇ ವಿಮಾನದಲ್ಲಿ ೧-೨ ಸಲ ತಿರುಗಿ ಅನುಭವ ಇರುವ ಪ್ರಿತ ಹಿಂದೆ ಹಳ್ಳಿಹೈದರ ತರ ನಾವುಗಳು ಹಿಂಬಾಲಿಸಿದೆವು ... ನಮ್ ಇಂಡಿಗೋ ವಿಮಾನ ಇದ್ದದು ಮಧ್ಯಾನ ೩.೦೦ ಗಂಟೆ ಗೆ .. ಬೆಂಗಳೂರುನಿಂದ ಕಲ್ಕತ್ತಾ ಗೆ... ವಿಮಾನ ಹೋಗಕೆ ಇನ್ನು ಒಂದುವರೆ ಗಂಟೆ ಸಮಯ ಇತ್ತು .. ನಮ್ ಬ್ಯಾಗ್ ನೆಲ್ಲ ಸೆಕ್ಯೂರಿಟಿ ಚೆಕ್ ಇನ್ಮಾಡ್ಸಿ ...ಕಿಟಕಿ ಸೈಡ್ ಗೆ ಬೋರ್ಡ್ಡಿಂಗ್ ಪಾಸು ತಗೊಂಡ್ ಆಯಿತು... ಮುಂದಿನ ಕಾರ್ಯಕ್ರಮ ...ಊಟ..

ಬೋರ್ಡ್ಡಿಂಗ್ ಪಾಸು ತಗೊಂಡ್ ಅದ ಮೇಲೆ ಹೊರಗಡೆ ಹೋಗೋ ಹಂಗೆ ಇಲ್ಲ..ಹಂಗು ಹೊರಗಡೆ ಹೋದ್ರೆ .ವಾಪಾಸ್ ಬರ ಬೇಕಾದರೆ ಅಲ್ಲಿ ಇರೋ ಪೋಲಿಸ್ ಒಳಗಡೆ ಬಿಟ್ಟಿಲ್ಲ ಅಂದ್ರೆ...ಏನು ಮಾಡದು ..ಸರಿ ...ಏರ್ ಪೋರ್ಟ್ ಒಳಗೆ ಹೋಟೆಲ್ ಅಶೋಕ್ ಇತ್ತು. ಬಿಲ್ ಜಾಸ್ತಿ ಅದ್ರು ಓಕೆ ಅಂತ ..ಅಲ್ಲಿಗೆ ಹೋದೆವು ...

ಶಶಿ: ಲೋ..ಸಂತೋಷ್ ...ಹೋಟೆಲ್ನಲ್ಲಿ ಯಾರು ಇಲ್ಲ ಮಗ.. .ಬೆಳಗೆ ಇಂದ ಈ ಹೋಟೆಲ್ ಗೆ ನಾವೇ ಫಸ್ಟ್ ಇರ್ಬೇಕು..ಅಲ್ವಾ..

ಸಂತೋಷ್ : ನಂಗು ಹಂಗೆ ಅನ್ನುಸ್ತ ಇದೆ ಲೇ.

ಶಶಿ : ಮೆನು ನೋಡನ ..ರೇಟ್ ತುಂಬಾ ಜಾಸ್ತಿ ಇದ್ರೆ..ಸುಮ್ನೆ ನಿರ್ ಕುಡ್ಕೊಂಡು ವಾಪಾಸ್ ಬರನ..ಆಯ್ತಾ..

ರಾಹುಲ್ : ಜಾಸ್ತಿ ಏನು ಇರಲ್ಲ ಮಗ...ಫಸ್ಟ್ ಮೆನು ನೋಡನ
ತಡಿ..

ದಿ ಗ್ರೇಟ್ ..೫ ಸ್ಟಾರ್ ..ಅಶೋಕ್ ಹೋಟೆಲ್ ನ ಒಳಗೆ ಹೋಗಿ ಕುಳಿತೆವು...ನೀಟ್ ಆಗಿ ಡ್ರೆಸ್ ಮಾಡಿಕೊಂಡಿದ್ದ ಒಬ್ಬ ಬಂದು ..ನಾಲ್ಕು ಲೋಟ ನಿರು ತಂದು ಕೊಟ್ಟು ..ಜೊತೆಯಲ್ಲಿ ಮೆನು ಕೊಟ್ಟನು...ಪ್ರಿತ ಮೆನು ತಗೊಂಡ ೨ ನಿಮಿಷ ನೋಡಿ.. ಸಂತೋಷ್ ಗೆಕೊಟ್ಟಳು ..ಸಂತೋಷ್ ನೋಡಿ ..ನನಗೆ ಕೊಟ್ಟನು ..ನಾನು ಓಪನ್ ಮಾಡಿ ನೋಡಿದ್ರೆ ..ಎಲ್ಲ ರೇಟ್ ೩ ಅಂಕಿ ಮೇಲೆ..ತತ್ ಯಾಕಪ್ಪ ಬಂದವು ಇಲ್ಲಿ ಅನ್ನುಸ್ತು...ಕಾಫಿ ,೭೫ ರುಪಾಯಿ ...ಚಹಾ ..೭೫ .ರುಪಾಯಿ...ಇವೆರೆಡರ ರೇಟ್ ಹಿಂಗೆ..ಬೇರೆ ತಿಂಡಿ ರೇಟ್ ಯಾಕೆ ಬಿಡಿ... ಏನು ಮಾಡದು .. ಇವ ಬೇರೆ ನಾವು ಆರ್ಡರ್ ಮಾಡ್ತಿವೆ ಅಂತ ಮುಕ ನೋಡ್ತಾ ಇದ್ದಾನೆ ..ಬರಿ ನಿರ್ ಕುಡಿಯಾಕೆ ಬಂದವು ಅಂತ ಹೆಂಗೆ ಹೇಳದು.....ಒಳ್ಳೆ ..ಮೈಯ ಮೇಲೆ ಇರುವೆ ಬಿಟ್ಟು ಕೊಂಡ ಹಾಗೆ ಆಗಿತು ನಮ್ ಕಥೆ... ಹೋಗ್ಲಿ ಅಂತ ..ಒಂದು ಗೋಬಿ ಮಂಚೂರಿ ..ಒಂದು ಚಹಾ ಆರ್ಡರ್ ಮಾಡಿದೆವು......
ಗೋಬಿ ಗೆ ೧೨೫ ರುಪಾಯಿ..ಚಹಾ ಕೆ ೭೫ ರುಪಾಯ್ ... ಗೋಬಿ ಕೆ ಕೊಟ್ಟ ೧೨೫ ರುಪಾಯಿನಲ್ಲಿ ನಮ್ ಮನೆ ಹತ್ರದ ಗೋಬಿಶಾಪ್ ನಲ್ಲಿ ೧ ವಾರ.. ದಿನ ರಾತ್ರಿ ... ಸಂತೋಷ್ ...ನಾನು ಇಬ್ರು ....ಫುಲ್ ತಟ್ಟೆ ಗೋಬಿ ತಿನ್ ಬೋದಾಗಿತು ...

ಸರಿ..ನಾವು ಆರ್ಡರ್ ಮಾಡಿದ ಗೋಬಿ ..ಚಹಾ ಬಂತು...ನಾವು ನಾಲ್ವರು ಟೇಸ್ಟ್ ಮಾಡಿದೆವು ..ನಿಜ ಹೇಳ್ಬೇಕು ಅಂದ್ರೆ ..ಗೋಬಿ ಮಂಚೂರಿ ಸಕ್ಕತ ಆಗಿಈತು .ಗೋಬಿ ಗೆ ಕೊಟ್ಟ ೧೨೫ ..ಫುಲ್ ಪೈಸ ವಸೂಲ್ ...ಆದ್ರೆ. ಚಹಾ ಮಾತ್ರ ..ಕೆಟ್ಟು ಕೆರ ಹಿಡಿದ ತರ ..ಇತ್ತು ..

ಸರಿ ..ಬಿಲ್ಲು ಕೊಟ್ಟು..ಹೊರಗಡೆ ಬಂದೆವು ...ಟೈಮ್ ನೋಡಿದರೆ ಇನ್ನು ೨. ೦೦ ಇನ್ನು ಒಂದು ಗಂಟೆ ಇದೆ..ಸರಿ ಫ್ಲೈಟ್ಬೋರ್ಡಿಂಗ್ ಶುರು ಆಯ್ತಾ ಅಂತ ನೋಡನ ಅಂತ ಹೋದ್ರೆ ..ನಮ್ ಫ್ಲೈಟ್ ಇನ್ನು ಒಂದು ಗಂಟೆ ಲೇಟ್ ಅಂತ ತಿಳಿತು... ಡೆಲ್ಲಿಇಂದ ಬರಬೇಕಾದ ಇಂಡಿಗೋ ಫ್ಲೈಟ್ ೧ ಗಂಟೆ ಲೇಟ್ ಅಂತೆ...ಅದೇ ಫ್ಲೈಟ್ ಕಲ್ಕತ್ತಾ ಗೆ ಹೋಗದ್ರಿಂದ ನಮಗೆ ಒಂದು ಗಂಟೆಲೇಟ್ ....ಏನು ಕತೆ ನಾವು ಹೊರಟ ಟೈಮ್ ಸರಿ ಇಲ್ಲ ಅನ್ಸತ್ತೆ ಅನ್ಕೊಂಡು ...ಅಲ್ಲೇ ಹೋಗಿ ಲೌಂಗ್ ನಲ್ಲಿ ಕುಳಿತು ಚೆನ್ನಾಗಿ ಹರಟೆಹೊಡೆದೆವು ...

ಅಂತು ನಂ ವಿಮಾನ ಇನ್ನು ಎರಡು ಗಂಟೆ ಲೇಟ್ ಆಗಿ ಬಂತು.. ಅದು ಬಂದಾಗಲೇ ೬ ಗಂಟೆ . ಸರಿ ಬಂದ ತಕ್ಷಣ ಬೋರ್ಡಿಂಗ್ ಸ್ಟಾರ್ಟ್ ಮಾಡಿದರು...ಬಸ್ಸಿನಲ್ಲಿ ವಿಮಾನದ ಹತ್ರ ಕರ್ಕೊಂಡು ಹೋದರು ..

ಮುಂಚೆ ನಾನು ವಿಮಾನನ ತುಂಬಾ ಹತ್ರದಿಂದ ನೋಡಿರಲಿಲ್ಲ...ಬರಿ ಆಕಾಶದ ಮೇಲೆ ಹೋಗಬೇಕಾದ್ರೆ ನೋಡಿದ್ದು ...ಇಲ್ಲಿಮೊದಲ ಸಲ ಹತ್ರದಿಂದ ನೋಡಲು ಅವಕಾಶ ಸಿಕ್ಕಾಗ ... ವಿಮಾನ ಅಂದ್ರೆ ಸಕ್ಕತ್ ದೊಡ್ದು ...ಚಿಕ್ಕ ಬೆಟ್ಟ ಇದ್ದಂಗೆ ಇರುತೆಅಂದುಕೊಂಡಿದ್ದೆ ...ಆದ್ರೆ ಇಲ್ಲಿ ಅಂದ್ರೆ ನಂ ವಿಮಾನ ಸಕ್ಕತ ಚಿಕ್ದು ಅನ್ನಿಸುತ ಇತ್ತು..ಆಮೇಲೆ ಗೊತಾಯ್ತು ...ಡೊಮೆಸ್ಟಿಕ್ ವಿಮಾನಚಿಕ್ದು ....ಇಂಟರ್ನ್ಯಾಷನಲ್ ವಿಮಾನಗಳು ಸಕ್ಕತ್ ದೊಡ್ದು ಅಂಥಾ..

.೦೦ ಗೆ ಬ್ಯಾಂಗಲೋರ್ ಬಿಟ್ಟ ನಂ ವಿಮಾನ ..ಕಲ್ಕತ್ತಾ ಸೇರಿದಾಗ ೯.೧೫ ನಿಮಿಷ...ಅಲ್ಲಿಂದ ನಮ್ಮ ಬ್ಯಾಗ್ ತಗೊಂಡು ಒಂದುಟ್ಯಾಕ್ಸ್ ಬುಕ್ ಮಾಡ್ಕೊಂಡು ..ಪ್ರಿತ ಡ್ಯಾಡಿ ಬುಕ್ ಮಾಡಿದ್ದ ಗೆಸ್ಟ್ ಹೌಸ್ ಹೊರೆಟೆವು ....ಎಲ್ಲರಿಗು ತುಂಬಾ ಹೊಟ್ಟೆ ಹಸಿಥ ಇತ್ತು. ಟೈಮ್ ಬೇರೆ ೧೦. ೩೦ ..ಇನ್ನು ನಾವು ಹೋಗಬೇಕಾದ ಜಾಗ 'ದಕುರಿಯ' ಇನ್ನು ಬಂದ್ರಿಲಿಲ್ಲ..ಟ್ಯಾಕ್ಸ್ ಡ್ರೈವರ್ ಕೇಳುದ್ರೆ ..೧೧ಗಂಟೆ ಮೇಲೆ ಎಲ್ಲ್ಲೂ ಊಟ ಬೇರೆ ಸಿಗಲ್ಲ ಅಂತ ಹೇಳ್ದ.. ಸರಿ ಅಲ್ಲಿ ಒಂದು ದಾಬ ತರ ಇರೋ ಒಂದು ಹೋಟೆಲ್ ಮುಂದೆ ನಿಲ್ಲಿಸಿರೋಟಿ ..ದಾಲ್ ..ಪ್ಯಾಕ್ ಮಾಡ್ಸಿ ..ಅಲ್ಲೇ ..ಸ್ವೀಟ್ ಲಸ್ಸಿ ಟೇಸ್ಟ್ ಮಾಡಿದೆವು ...ಹೊಟ್ಟೆಹಸಿದಿದಕ್ಕೆ ...ಅ ಲಸ್ಸಿ ಸೂಪರ್ ಆಗಿಇತ್ತು... ಸರಿ ..ಮತ್ತೆ ಹೊರೆಟೆವು . ಸರಿಯಾಗಿ ೧೧.೩೦ ಕೆ 'ದಕುರಿಯ' ಜಾಗಕ್ಕೆ ಬಂದೆವು.

ರಾಹುಲ್ : ಪ್ರಿತ..ಮುಂಚೆ ಈ ಗೆಸ್ಟ್ ಹೌಸ್ ಗೆ ಬಂದಿದ್ದ ?

ಪ್ರಿತ :
ಇಲ್ಲ ರಾಹುಲ್...ನಂಗೆ ಡ್ಯಾಡಿ ಹೇಳಿದ್ದರು ..ಇಲ್ಲಿ ಎಲ್ಲೋ ಬರುತ್ತೆ ಅಂತ..

ಶಶಿ : ಡ್ರೈವ್ ಗೆ ಕೇಳು.. ಅವನಿಗೆ ಗೆಸ್ಟ್ ಹೌಸ್ ಅಡ್ರೆಸ್ ಗೊತ್ತ ಅಂತ ..

ಡ್ರೈವ್
ಗೆ ಕೇಳ್ದ್ರೆ ಅವನಿಗೆ ಗೊತ್ತಿಲ್ಲ ...ಬೇರೆ ಜನ ವಿಚಾರಿಸೋಣ ಅಂದ್ರೆ..ಯಾರ ಇಲ್ಲಿ ಸಿಕ್ತ ಇಲ್ಲ ...ರೋಡ್ನಲ್ಲಿ ಜನ ಜನಗಳೇಇಲ್ಲ..ಏನು ಮಾಡದು...?

ಅಲ್ಲಿ ಒಂದು ಅಂಗಡಿ ಇತ್ತು ..ಅದರ ಶಟರ್ ...ಮುಕ್ಕಾಲು ಭಾಗ ಮುಚ್ಚಿತು..ಕಾಲು ಭಾಗ ದಿಂದ ಸ್ವಲ್ಪ್ ಬೆಳಕು ಬರ್ತಾ ಇತ್ತು..

ನಾನು ..ರಾಹುಲ್ ಕಾರ್ ಹತ್ರ ಇದ್ವು..ಸಂತೋಷ್ ಕಾರ್ ಇಂದ ಸ್ವಲ್ಪ ದೂರದಲ್ಲಿ ಡ್ರೈವರ್ ಜೊತೆ ಅಡ್ರೆಸ್ ಹುಡುಕುತ್ತ ಇದ್ದಾ..

ಪ್ರಿತ.. ?

ಅಲ್ಲಿ ಅಂಗಡಿ ಇತ್ತಲ್ಲ ..ಪ್ರಿತ ಅಲ್ಲಿಗೆ ಹೋದಳು.. ನಾನು..ರಾಹುಲ್ ..ನೋಡ್ತಾ ಇದ್ವು ... ಪ್ರಿತ ಅಲ್ಲಿಗೆ ಹೋದವಳೇ ..ತಕ್ಷಣ .. ಅಂಗಡಿಯ ಶಟರ್ ಅನ್ನು ಪೂರ್ತಿ ಮೇಲಕ್ಕೆ ಎಳೆದಳು...

ಒಳಗಡೆ ನೋಡಿದರೆ..ಅದು ಒಂದು ಹೋಟೆಲ್ ..ಮದ್ದ್ಯಒಂದು ಟೇಬಲ್ ಮೇಲೆ ಜನ .. ಬಿಯರ್ ಬಾಟಲಿ ... ಲೋಟ ..

ಪ್ರಿತ ಅವರ ಮುಕ ನೋಡ್ತಾ ಇದ್ದಾಳೆ ...ಅವರು ಜನ ಪ್ರಿತ ಮುಕ ನೋಡ್ತಾ ಇದ್ದಾರೆ..

ಸಂದರ್ಭ ಹೆಂಗೆ ಇತ್ತು ಅಂದ್ರೆ...ನೀವು ರಾಜಕುಮಾರ್ ಮಾಡಿರೋ ' ಗೋವಾದಲ್ಲಿ ಏಜೆಂಟ್ ೯೯೯' ಫಿಲಂ ನೋಡಿದಿರಾ...ಅದರಲ್ಲಿ ...ಹಿಂಗೆ ನಾಕು ಜನ ವಿಲನ್ ಗಳು ಬಾರ್ ನಲ್ಲಿ ಶಟರ್ ಹಾಕೊಂಡು ವಿಸ್ಕಿ ಕುಡಿತ ಇರ್ತಾರೆ...ರಾಜ್ ಕುಮಾರ್ ..ಹೀರೋ ತರ ಎಂಟ್ರಿ ಕೊಟ್ಟು ..ಶಟರ್ ಮೇಲೆ ಎಳೆದು ..ಆಮೇಲೆ ಫುಲ್ ಬ್ಲಾಸ್ಟ್ ...

ಪ್ರಿತ ಹಂಗೆ ನೋಡ್ತಾನೆ ಇದ್ದಾಳೆ ..ಏನು ಕೇಳ್ತಾನು ಇಲ್ಲ ...ಸುಮ್ನೆ ಹಂಗೆ ನೋಡ್ತಾ ಇದ್ದಾಳೆ..

ನಾಲ್ಕು ಜನಕ್ಕೆ ಫುಲ್ ಶಾಕ್ ...ರಾತ್ರಿ ೧೧.೪೦ ರಲ್ಲಿ ಒಂದು ಹುಡುಗಿ ಬಂದು ನಂ ಹೋಟೆಲ್ ಶಟರ್ ತೆಗದು ಪೋಸ್ ಕೊಡ್ತಾ ಇದ್ದಾಳೆ ...'ಕಾಲ ಕೆಟ್ಟು ಹೋಯ್ತು' ಅಂಥ ಮನಸಲ್ಲೇ ಅಂದುಕೊಂಡು ..ಪಾಪ ಎಲ್ಲರು .. ೪೪೦ ವೋಲ್ಟ್ ಕರೆಂಟ್ ಹೊಡ್ಸ್ಕಂಡುರೋ ತರ ಕುತೋರೆ ..

ನನಗೆ, ರಾಹುಲ್ ಗೆ, ಸಂತೋಷ್ ಗೆ ..ಗಾಬರಿ...ಜೊತೆಗೆ ಫುಲ್ ನಗು..ಮುಂದೆ ಏನು ಅಂಥಾ..

ಅಂತು ಪ್ರಿತ ನೆ ಕೊನೆಗೆ ಅವರನ್ನೇ ಅಡ್ರೆಸ್ ಎಲ್ಲಿ ಅಂತ ಕೆಳುದ್ಲು ...

ರೂಂ ಬುಕ್ ಮಾಡಿದ ಗೆಸ್ಟ್ ಹೌಸ್ ಅ ಹೋಟೆಲ್ ಪಕ್ಕದ ಅಂಗಡಿಯ ಮೇಲೆ ಇತ್ತು ..ಸರಿ..ರೂಂ ಗೆ ಹೋಗಿ ಊಟ ಮಾಡಿಈದನ್ನೇ ನೆನಸ್ಕೊಂಡು ಚೆನ್ನಾಗಿ ನಕ್ಕಿ ನಕ್ಕಿ ..ಸುಸ್ತಾಗಿ ..ಆಮೇಲೆ ನಿದ್ದೆ ಮಾಡಿದೆವು ....

ಅಂತು ಈ ಘಟನೆ ...ನಮ್ಮ ಮನಸಿನಲ್ಲಿ ಸಾದಾ ಕಾಲ ಇರುವಂಗೆ ಮಾಡಿತು... :)